24 Hour Order

+91 44 4391 7000

home sitemap contact us

tbuy-orbitrek-goto youtube
 
           
 
English Tamil Hindi Telugu Malayalam Kannada
 

“ನಿಮ್ಮ ಮಗು ಓದುತ್ತದೆ” ಎನ್ನುವುದು ಏನು?

 

ನಿಮ್ಮ ಮಗು ಓದುತ್ತದೆ ಎನ್ನುವುದು ನಿಮ್ಮ ಮಗುವಿಗೆ ಅಕ್ಷರಗಳು, ಪದಗಳು ಮತ್ತು ಸ್ವರಗಳನ್ನು ಬಹಳ ಚಿಕ್ಕ ವಯಸ್ಸಿನಲ್ಲೇ ಪರಿಚಯಿಸುವ ಒಂದು ವ್ಯವಸ್ಥೆಯಾಗಿದೆ. ನಿಮ್ಮ ಮಗು ಓದುತ್ತದೆ ಎನ್ನುವುದು ನಿಮ್ಮ ಮಗು ಬರವಣಿಗೆಯ ಶೈಲಿಯನ್ನು ಕಲಿಯಲು ರೂಪಿಸಿರುವ ಒಂದು ವಿಶಿಷ್ಟ ಸಾಧನವಾಗಿದೆ.

ನಿಮ್ಮ ಮಗು ಓದುತ್ತದೆ ಎನ್ನುವುದು ಹೇಗೆ ಕೆಲಸ ಮಾಡುತ್ತದೆ

ನಿಮ್ಮ ಮಗು ಓದುತ್ತದೆ ಎನ್ನುವ ಕಾರ್ಯಕ್ರಮವು ಬಳಸಲು ಸುಲಭವಾಗಿದೆ, ಹೆಚ್ಚಾಗಿ, ಆನಂದ ನೀಡುತ್ತದೆ! ಮೊದಲಿಗೆ ನಾವು ಸಂವಹನ ಮತ್ತು ಬಹು-ಇಂದ್ರಿಯಗಳ ವಿಧಾನವನ್ನು ಬಳಸುತ್ತೇವೆ. ನಿಮ್ಮ ಮಗು ಓದುತ್ತದೆ ಎನ್ನುವ ಪದ್ಧತಿಯಿಂದ , ಮಕ್ಕಳು ಪದಗಳನ್ನು ಕೇಳುವುದರೆ ಜೊತೆಗೇ ಪದಗಳನ್ನು ನೋಡಲೂ ಅನುಮತಿ ನೀಡಲಾಗುತ್ತದೆ. ಮಕ್ಕಳು ಬೇರೆ ಸಮಯಕ್ಕಿಂತ ಶೈಶವಾವಸ್ಥೆಯಲ್ಲಿ ಭಾಷೆಯನ್ನು ವೇಗವಾಗಿ ಮತ್ತು ಸುಲಭವಾಗಿ ಕಲಿಯುವುದರಿಂದ ನಾವು ಈ ಪ್ರಾಕೃತಿಕ [ನೈಸರ್ಗಿಕ] ಅವಕಾಶವನ್ನು ಮಕ್ಕಳಿಗೆ ಓದಲು ಹಾಗೂ ಬರೆಯಲು ಕಲಿಸಲು ಬಳಸಿಕೊಳ್ಳುತ್ತೇವೆ.

ಜೊತೆಗೆ, ನಾವು ಮಕ್ಕಳಿಗೆ ಪದಗಳನ್ನು ಹೇಳಲು ಮತ್ತು ದೈಹಿಕ ಚಟುವಟಿಕೆಗೆ ಪ್ರೋತ್ಸಾಹ ನೀಡುತ್ತೇವೆ, ಇದು ಅವರಿಗೆ ಪದಗಳ ಅರ್ಥ ತಿಳಿಯುವಂತೆ ಮಾಡುತ್ತದೆ. ಇದರೊಂದಿಗೆ ಡಾ. ಟಿಟ್ಜರ್ ಮಕ್ಕಳು ಪದಗಳಿಗೆ ಸಂಬಂಧಿಸಿದಂತೆ ದೈಹಿಕ ಚಟುವಟಿಕೆ ಮಾಡಲು ಸೂಚಿಸಿದ್ದಾರೆ. ಆದ್ದರಿಂದ ಈ ಕಾರ್ಯಕ್ರಮವು ಮಕ್ಕಳು ಮತ್ತು ಶಿಶುಗಳಿಗೆ ಚಪ್ಪಾಳೆ ತಟ್ಟಲು, ಕೈಯಾಡಿಸಲು, ಹಾಡಲು, ಶರೀರದ ಭಾಗಗಳನ್ನು ತೋರಿಸಲು ಇತ್ಯಾದಿಗಳಿಗೆ ಪ್ರೋತ್ಸಾಹ ನೀಡುತ್ತದೆ.n.

ಬಹು-ಇಂದ್ರಿಯ ಕಲಿಕೆಯ ಸಂವಹನವನ್ನು ಮೇಲ್ವಿಚಾರಕರಿಗೆ ತೋರಿಸಲಾಗುತ್ತದೆ. ಮಕ್ಕಳ ಕಲಿಕೆಯ ಮೇಲೆ ಇದು ಎಂತಹ ಮಹತ್ತರ ಪರಿಣಾಮ ಬೀರುತ್ತದೆ ಎಂದು ಸಾಬೀತಾಗಿದ್ದು ನಿಜವಾಗಿಯೂ ಒಂದು ಆನಂದಕರವಾದ ವಿಷಯವಾಗಿದೆ! ಈ ಸಂಪೂರ್ಣ ಕಾರ್ಯಕ್ರಮವು ಮಕ್ಕಳು ಟಿ.ವಿ ನೋಡುವುದಕ್ಕಿಂತ ಕಡಿಮೆ ಅವಧಿಯಲ್ಲಿ ಸುಲಭವಾಗಿ ನಡೆಯುತ್ತದೆ. ನಾವು ನಿಮ್ಮ ಮಕ್ಕಳು ಓದುವುದನ್ನು ಕಲಿಯುವವರೆಗೂ ಟಿ.ವಿ. ನೋಡುವುದು ಒಂದು ಮಿತಿಯಲ್ಲಿರಲಿ ಎಂದು ಬಹುವಾಗಿ ಸೂಚಿಸುತ್ತೇವೆ.

Humen Brain Development
 
We can read

ನನ್ನ ಮಗುವಿಗೆ ನಾನು ಯಾವಾಗ ಈ ಕಾರ್ಯಕ್ರಮವನ್ನು ಆರಂಭಿಸಲಿ?

ಮಗುವಿನ ಮೆದುಳು ಜ್ಞಾನಕ್ಕಾಗಿ ಹಂಬಲಿಸುವ ಒಂದು ಹೀರುಪದಾರ್ಥವಿದ್ದಂತೆ. ಇದು ಪ್ರೇರೇಪಣೆಗಾಗಿ ಹಂಬಲಿಸಿ, ಒಂದು ನಿರ್ದಿಷ್ಟ ಕ್ರಮದಲ್ಲಿ ಬೆಳವಣಿಗೆಯಾಗುತ್ತದೆ: ಭಾಗಶಃ 90% ನಷ್ಟು ಜೀವನದ ಮೊದಲ ಐದು ವರ್ಷಗಳಲ್ಲಿನಡೆಯುತ್ತದೆ!

ಭಾಷೆಯನ್ನು ಕಲಿಯಲು ಬಹಳ ಸುಲಭವಾದ ಸಮಯವೆಂದರೆ ಮಗು ಅಥವಾ ಶಿಶುವಾಗಿರುವ ಸಂದರ್ಭ. ಈ ಸಮಯದಲ್ಲಿ ಮೆದುಳು ಪ್ರತಿ ಕ್ಷಣವೂ ಸಾವಿರಾರು ವಿಷಯಗಳನ್ನು ಸೃಷ್ಟಿಸುತ್ತಿರುತ್ತದೆ – ಇದು ಬರವಣಿಗೆಯ ಪದ ಮತ್ತು ಮಾತನಾಡುವ ಪದಗಳೆರಡನ್ನೂ ಒಟ್ಟಾಗಿ ಬಹಳ ಸುಲಭ ರೀತಿಯಲ್ಲಿ ಕಲಿಯಲು ಅನುವು ಮಾಡಿಕೊಡುತ್ತದೆ.

ಮಗುವು ನೋಟದ ಜಾಡನ್ನು ಅನುಸರಿಸುವುದನ್ನು ಕಲಿತ ಕೆಲವೇ ದಿನಗಳ ನಂತರ ಮಗುವಿಗೆ ಇದನ್ನು ಆರಂಭಿಸಲು ಉತ್ತಮ ಸಮಯವಾಗಿದೆ. ಅರ್ಧದಷ್ಟು ಮಕ್ಕಳು ತಮ್ಮ ಎರಡನೇ ತಿಂಗಳಿನಲ್ಲಿ ನೋಟದ ಜಾಡನ್ನು ಅನುಸರಿಸುವುದನ್ನು ಕಲಿತಿರುತ್ತಾರೆ ಹಾಗೂ 90% ನಷ್ಟು ಮಕ್ಕಳು ಇದನ್ನು ತಮ್ಮ ಮೂರನೆಯ ತಿಂಗಳಿಗೆ ಕಲಿತಿರುತ್ತಾರೆ. ಜೀವನದ ಆರಂಭದಲ್ಲಿ ನರಗಳು ಹೆಚ್ಚು ಮೆದುವಾಗಿರುವುದರಿಂದ (ಪರಿಸರಕ್ಕೆ ಅನುಗುಣವಾಗಿ ಮೆದುಳು ಬದಲಾಗುವ ಅಥವಾ ಮಾರ್ಪಾಡಾಗುವ ಸಾಮರ್ಥ್ಯ) ಮೆದುಳು ಓದಲು ಹೆಚ್ಚು ಪರಿಣಾಮಕಾರಿಯಾಗಿ ಬೆಳೆದಿರುತ್ತದೆ. ಆದ್ದರಿಂದ ಮಗುವು ಮಾತನಾಡುವ ಭಾಷೆಯಷ್ಟೇ ಸ್ವಾಭಾವಿಕವಾಗಿ ಓದುವುದನ್ನೂ ಮಾಡುತ್ತದೆ.

 

ನೀವು ಏನು ಪಡೆಯುತ್ತೀರಿ?

ABC ಯಷ್ಟೇ ಸುಲಭವಾಗಿ ಆರಂಭಿಸಬಹುದು. ನಿಮ್ಮ ಮಗು ಓದಬಲ್ಲದು ಎನ್ನುವ ಶ್ರೇಷ್ಠ ಸಂಗ್ರಹದೊಂದಿಗೆ, ನೀವು ನಿಮ್ಮ ಮಗುವಿನ ಸಾಮರ್ಥ್ಯವನ್ನು ತೆರೆಯುವ ಸಂಪೂರ್ಣ ಸಾಧನದ ಜೊತೆಯನ್ನು ಪಡೆಯುವಿರಿ.

ನಿಮ್ಮ ಮಗುವಿಗೆ:

ನಿಮ್ಮ ಮಗು ಓದುತ್ತದೆ! ಪೂರ್ಣ 5 –ಹಂತಗಳ ಡಿವಿಡಿ ಓದುವ      ವ್ಯವಸ್ಥೆ. ಈ ಆನಂದದಾಯಕ, ಸಂವಹನಕಾರೀ ವೀಡಿಯೋ ನಿಮ್ಮ ಮಗುವನ್ನು ಓದಲು ಮತ್ತು ಮನರಂಜಿಸಲು ನೆರವಾಗುತ್ತದೆ!

ಸ್ಲೈಡಿಂಗ್ ಪದಗಳ ಕಾರ್ಡ್‘ನ 5 ಸೆಟ್‘ಗಳು The read & play cards      ಓದಿ, ಆಟವಾಡುವ ಕಾರ್ಡ್‘ಗಳು ಪ್ರತಿ ಹಂತದಲ್ಲೂ ಜೊತೆಯಿದ್ದು ನಿಮ್ಮ ಮಗು ಏನು ಕಲಿತಿದೆ ಎನ್ನುವುದನ್ನು ತಿಳಿಸುತ್ತದೆ..

5 ಲಿಫ್ಟ್ –ಎ –ಫ್ಲಾಪ್ ಪುಸ್ತಕಗಳು ಪದ ಮತ್ತು ಚಿತ್ರಗಳ ಪುಸ್ತಕಗಳು ಪ್ರತಿ ಹಂತದಲ್ಲೂ ಜೊತೆಯಿದ್ದು, ಡಿವಿಡಿಯಲ್ಲಿರುವ ಪರಿಚಿತ ಪದಗಳನ್ನು ಹೊಸ ವಿನ್ಯಾಸದಲ್ಲಿ ಪರಿಚಯಿಸುತ್ತದೆ.

ಮೊದಲ ಕಲಿಕೆಯ ಕಾರ್ಯಯೋಜನೆಯ ಡಿವಿಡಿಡಾ. ಟಿಟ್ಜರ್ ಮೊದಲ ಭಾಷಾ ಬೆಳವಣಿಗೆಯ ಆನಂದದಾಯಕ, ಬಹು-ಇಂದ್ರಿಯ ವಿಧಾನದ ರಹಸ್ಯಗಳನ್ನು ಹಂಚಿಕೊಂಡಿದ್ದಾರೆ.

ಪೋಷಕರ ಮಾರ್ಗದರ್ಶಿ. ನಿಮ್ಮ ಮಗು ಓದುತ್ತದೆ! ಕಾರ್ಯಕ್ರಮದ ಕುರಿತು ಸರಳವಾದ ಹಂತ, ಹಂತದ ಸಲಹೆಗಳನ್ನು ನೀಡುತ್ತದೆ.

ಬೋಧನೆಯ ಕಾರ್ಡ್. ನಿಮ್ಮ ಮಗುವಿನೊಂದಿಗೆ ಆಡಲು 83 ಎರಡೂ ಕಡೆಯಿರುವ ಸಂವಹನದ ಕಾರ್ಡ್‘ನಲ್ಲಿ 15 ಆನಂದಕರ ಆಟಗಳು

ನನ್ನ ಮೊದಲ ಪದಗಳು ಬೆಳೆಯುವ ಮನಸ್ಸಿಗೆ 30 ಪದಗಳು. ಪದಗಳ ಕಲಿಕೆಯನ್ನು ಆನಂದದಾಯಕವಾಗಿಸಿ, ಸುಲಭಗೊಳಿಸಲು ಪುಟಗಳಲ್ಲಿ ಸ್ಲೈಡ್‘ಗಳಿರುವ ಪುಸ್ತಕ.


What you get